Site icon NBTV Kannada

ಎಸ್ ಸಿ ಉಪ ವರ್ಗಿಕರಣ ಮಸೂದೆ ಅಂಗೀಕರಿಸಿದ ತಲಂಗಾಣ ವಿಧಾನಸಭೆ

ಕಳೆದ ವರ್ಷ ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಮೀಸಲಾತಿಯ ನ್ಯಾಯಯುತ ವಿತರಣೆಗಾಗಿ ಪರಿಶಿಷ್ಟ ಜಾತಿಗಳ (SC) ಉಪ ವರ್ಗೀಕರಣದ ಮಸೂದೆಯನ್ನು ತೆಲಂಗಾಣ ವಿಧಾನಸಭೆಯು ಮಂಗಳವಾರ ಅಂಗೀಕರಿಸಿದೆ. ಎಲ್ಲ ಪಕ್ಷಗಳು ಅಭಿಮತ ಪಡೆದು ತೆಲಂಗಾಣ ಪ್ರಸ್ತುತ ಸರ್ಕಾರವು ಪರಿಶಿಷ್ಟ ಜಾತಿಗಳ (ಮೀಸಲಾತಿಗಳ ತರ್ಕಬದ್ಧಗೊಳಿಸುವಿಕೆ) ಮಸೂದೆ – 2025 ಯನ್ನು ಸರ್ವಾನುಮತದಿಂದ ಅಂಗೀಕಾರಕ್ಕೆ ಒಪ್ಪಿಗೆ ನೀಡಿದೆ .

ಎಸ್‌ಸಿಗಳಿಗೆ ಲಭ್ಯವಿರುವ ಶೇ. 15 ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಈ ಮಸೂದೆಯಲ್ಲಿ ರಾಜ್ಯದ 59 ಎಸ್‌ಸಿ ಉಪಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಅಥವಾ ಕಡೆಗಣಿಸಲ್ಪಟ್ಟ
15 ಎಸ್‌ಸಿ ಉಪ ಜಾತಿಗಳಲ್ಲಿ ಶೇ. 3.288 ಜನಸಂಖ್ಯೆಗೆ ಶೇ. 1 ರಷ್ಟು ಮೀಸಲಾತಿ.
18 ಎಸ್‌ಸಿ ಉಪಜಾತಿಗಳನ್ನು ಹೊಂದಿರವ ಎರಡನೇ ಗುಂಪಿನ ಶೇ. 62.748 ರಷ್ಟು ಜನಸಂಖ್ಯೆಗೆ ಶೇ. 9 ರಷ್ಟು ಮೀಸಲಾತಿ .
26 ಎಸ್‌ಸಿ ಉಪಜಾತಿಗಳ ಪೈಕಿ ಶೇಕಡಾ 33.963 ಜನಸಂಖ್ಯೆಯನ್ನು ಒಳಗೊಂಡಿರುವ ಮೂರನೇ ಗುಂಪಿನ ಶೇ. 5 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದ್ದು .

ಮಸೂದೆಯನ್ನು ಮಂಡಿಸಿದ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ಅಂಗೀಕಾರವನ್ನು ಸಾಮಾಜಿಕ ನ್ಯಾಯಕ್ಕಾಗಿ ಐತಿಹಾಸಿಕ ಕ್ರಮ ಎಂದು ಕರೆದರು ಸುಪ್ರೀಂ ಕೋರ್ಟ್ ಕಳೆದ ವರ್ಷ ಎಸ್.ಸಿ ಉಪ ವರ್ಗೀಕರಣದ ಪರವಾಗಿ ತೀರ್ಪು ನೀಡಿದ ನಂತರವೇ ನಮ್ಮ ಸರ್ಕಾರವು ಸಂಪುಟ ಉಪಸಮಿತಿಯನ್ನು ರಚಿಸಿ,
ಎಸ್.ಸಿ ಉಪ ವರ್ಗೀಕರಣದ ಅನುಷ್ಠಾನಕ್ಕೆ ಶಿಫಾರಸುಗಳನ್ನು ಮಾಡಲು ಏಕ ಸದಸ್ಯ ನ್ಯಾಯಾಂಗ ಆಯೋಗವನ್ನು ನೇಮಿಸಿತು. ಬಳಿಕ ಅದರ ವರದಿಯನ್ನು ಅಂಗೀಕರಿಸಿದೆ. ಆಯೋಗವು ರಾಜ್ಯದ 59 ಎಸ್.ಸಿ ಉಪ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಎಸ್.ಸಿಗಳಿಗೆ ಲಭ್ಯವಿರುವ ಶೇ15 ರಷ್ಟು ಮೀಸಲಾತಿಯ ಸಮಾನ ಹಂಚಿಕೆಯನ್ನು ಖಚಿತಪಡಿಸಿದೆ, ಎಂದು ತಿಳಿಸುವ ಮೂಲಕ.

ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15 ರಿಂದ ಶೇ. 18 ಕ್ಕೆ ಹೆಚ್ಚಿಸುವಂತೆ ಕೆಲವು ಸದಸ್ಯರು ಮಾಡಿದ ಮನವಿಗೆ ಅವರು ಸಹಮತ ವ್ಯಕ್ತಪಡಿಸಿದ್ದು . 2026 ರ ಜನಗಣತಿಯ ನಂತರ ಸರ್ಕಾರವು ಅವರ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಕೋಟಾವನ್ನು ಹೆಚ್ಚಿಸಲಿದೆ ಎಂದು ಅವರು ಸದನಕ್ಕೆ ಭರವಸೆ ನೀಡಿದರು. ರಾಜ್ಯದಲ್ಲಿ ಪ್ರಸ್ತುತ 2011 ರ ಜನಗಣತಿಯ ಆಧಾರದ ಮೇಲೆ ಜನಸಂಖ್ಯಾ ದತ್ತಾಂಶವಿದೆ. ಎಸ್‌ಸಿಗಳ ಉಪ-ವರ್ಗೀಕರಣದ ಚಳುವಳಿ ಸುಧೀರ್ಘ 30 ವರ್ಷದ ಹೋರಾಟವನ್ನು ಸ್ಮರಿಸಿ. ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದ ಒಂದು ಗಂಟೆಯೊಳಗೆ, ರಾಜ್ಯ ಸರ್ಕಾರವು ಅದನ್ನು ಜಾರಿಗೆ ತರಲು ನಿರ್ಧರಿಸಿತು ಎಂದು ಅವರು ನೆನಪಿಸಿಕೊಂಡರು.

ಈ ಸಮಸ್ಯೆಯನ್ನು ಅಧ್ಯಯನ ಮಾಡಲು ಮತ್ತು ಶಿಫಾರಸುಗಳನ್ನು ನೀಡಲು ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಸಂಪುಟದ ಉಪ-ಸಮಿತಿಯನ್ನು ರಚಿಸಿತು. ಅದರ ಶಿಫಾರಸಿನ ಮೇರೆಗೆ, ಸರ್ಕಾರವು ಮಾಜಿ ಹೈಕೋರ್ಟ್ ನ್ಯಾಯಾಧೀಶ ಶಮೀಮ್ ಅಖ್ತರ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನು ನೇಮಿಸಿ. ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಂದ ಎಸ್‌ಸಿಗಳ 59 ಉಪ-ಜಾತಿಗಳಿಗೆ ಸಂಬಂಧಿಸಿದ ಜನಸಂಖ್ಯೆಯ , ಸಾಕ್ಷರತೆ, ಉದ್ಯೋಗ, ನೇಮಕಾತಿ, ಆರ್ಥಿಕ ನೆರವು ಮತ್ತು ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಪ್ರಾಯೋಗಿಕ ಅಂಕಿ ಸಂಖ್ಯೆಯ ಆಧಾರಿತವಾಗಿ ಮಾಹಿತಿ ಸಂಗ್ರಹದ ವರದಿ ರೂಪಗೊಂಡಿದ್ದು.

ಆಯೋಗದ ವರದಿಯನ್ನು ಮುಖ್ಯಮಂತ್ರಿ ಪರವಾಗಿ ಆರೋಗ್ಯ ಸಚಿವ ದಾಮೋದರ ರಾಜ ನರಸಿಂಹ ರವರು ಫೆಬ್ರವರಿ 4 ರಂದು ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ, ಪರಿಶಿಷ್ಟ ಜಾತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆಯ ಅಗತ್ಯವಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಸಾರಾಂಶವನ್ನು ಗಮನದಲ್ಲಿಟ್ಟುಕೊಂಡು ಮಸೂದೆಯನ್ನು ರಚಿಸಲಾಗಿದೆ ಎಂದು ವಿವರಿಸಿದ್ದರು.
ಉಪ-ವರ್ಗೀಕರಣವು ಹೆಚ್ಚಿನ ಸಂಖ್ಯೆಯ ಪರಿಶಿಷ್ಟರ ಮೇಲೆ ಪರಿಣಾಮ ಬೀರಿದೆ ಎಂಬ ಕೆಲವರಹೇಳಿಕೆಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟು ಎಸ್‌ಸಿ ಜನಸಂಖ್ಯೆಯ 52,17,768 ರಲ್ಲಿ ಕೇವಲ 3.43 ಪ್ರತಿಶತದಷ್ಟು ಇರುವ 1,78,914 ಜನರ ಮೇಲೆ ಮಾತ್ರ ಉಪ-ವರ್ಗೀಕರಣ ಪರಿಣಾಮ ಬೀರಿದೆ ಎಂದು ಸಚಿವರು ಹೇಳಿದರು.

Exit mobile version