Site icon NBTV Kannada

ಎಎಬಿ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಕಿರಿಯ ವಕೀಲ ರಾಕೇಶ್‌ ಎಸ್‌ ಎನ್‌ ಆಯ್ಕೆ

ಬೆಂಗಳೂರು: ಭಾನುವಾರ ಫೆಬ್ರವರಿ 16 ತಾರೀಖಿನಂದು ನಡೆದ ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿದಂತೆ ಹಲವು ಹುದ್ದೆಗಳಿಗೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಗೀತಾ ರಾಜ್‌ ಹಾಗೂ ಎಎಬಿ ಮಾಜಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ.ಜಿ ರವರ ಬೆಂಬಲಿತ ಅಭ್ಯರ್ಥಿ ರಾಕೇಶ್‌ ಎಸ್.ಎನ್‌ ರವರು ಸಿಟಿ ಸಿವಿಲ್‌ ಕೋರ್ಟ್‌ ವಿಭಾಗದಿಂದ ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆಯ್ಕೆಯಾಗಿದ್ದು. ಇವರು ಚುನಾವಣೆಗೆ ಸ್ಪರ್ಧಿಸಿದ ಹಲವರಲ್ಲಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದು. ಅನೇಕ ಯುವ ವಕೀಲರಿಗೆ ಸ್ಪೂರ್ಥಿಯಾಗಿದ್ದಾರೆ. ರಾಕೇಶ್‌ ರವರು ಈ ಹಿಂದೆ ಅಂತರ್‌ ರಾಷ್ಟ್ರೀಯ ಕಬಡಿ ಕ್ರೀಡ ಪಟುವಾಗಿದ್ದು. ಸುಮಾರು ಮೂರ್ನಾಲ್ಕು ವರ್ಷಗಳಿಂದ ಹಿರಿಯ ವಕೀಲರಾದ ನಾರಾಯಣಸ್ವಾಮಿ.ಜಿ ರವರ ಬಳಿ ಕಿರಿಯ ವಕೀಲರಾಗಿ ತಮ್ಮ ವೃತ್ತಿ ಆರಂಭ ಮಾಡಿದ್ದು. ತಮ್ಮ ಕಾರ್ಯವ್ಯಾಪ್ತಿಯಲ್ಲಿ ಅನೇಕರೊಡನೆ ವಿಶ್ವಾಸದಿಂದ ಕೂಡಿದ್ದು ಮತ್ತು ತಮ್ಮ ಹಿರಿಯ ವಕೀಲರ ಮಾರ್ಗದರ್ಶನವೆ ಈ ಗೆಲುವಿಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

Exit mobile version