ಬೆಂಗಳೂರು (25): ಸಾರ್ವಜನಿಕ ಹಿತಾಸಕ್ತಿ ದೂರಿನ ಅಡಿಯಲ್ಲಿ ನಿವೇಶನ ನಂ 223 ಚಂದ್ರನಗರ, ಕುಮಾರಸ್ವಾಮಿ ಲೇಔಟ್ 2ನೇ ಹಂತಕ್ಕೆ ಹೊಂದಿಕೊಂಡಂತೆ ಇರುವ ಪ್ರಾಧಿಕಾರದ ಸ್ಥಳದ ಮೂಲೆಯಲ್ಲಿ ಮೂರ್ತಿಯೆಂಬ ವ್ಯಕ್ತಿಯು ಅನಧಿಕೃತ ಕಟ್ಟಡದ ನಿರ್ಮಾಣದ ಬಗ್ಗೆ ಮತ್ತು ಓಂ ಶಕ್ತಿ ದೇವಾಲಯ ಆಡಳಿತ ಮಂಡಲಿಯವರು ರಸ್ತೆಯಲ್ಲಿ “ಶಾಡ್” ನ್ನು ನಿರ್ಮಿಸಿರುವ ಬಗ್ಗೆ. ಕಾನೂನು ವಿದ್ಯಾರ್ಥಿಯಾದ ಸಂಜಯ್ .ಎಸ್ ಎಂಬುವರು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಬಿ.ಬಿ.ಎಂ.ಪಿ, ಉತ್ತರಹಳ್ಳಿ, ಸುಬ್ರಮಣ್ಯಪುರ ಮುಖ್ಯ ರಸ್ತೆ, ಪೊಲೀಸ್ ಠಾಣೆ ಹತ್ತಿರ ಬೆಂಗಳೂರು ಇವರಿಗೆ ದೂರಿನ ಮೂಲಕ ಅನಧಿಕೃತ ʼಶೇಡ್ʼ ನಿರ್ಮಾಣದ ಬಗ್ಗೆ ತಾವು ತೆಗೆದುಕೊಂಡ ಕ್ರಮವನ್ನು ತಿಳಿಸಿ ಎಂದು ಮಾಹಿತಿ ಹಕ್ಕು 6(1) ಅಡಿಯಲ್ಲಿ ಮಾಹಿತಿಯನ್ನು ಕೋರಿದಾಗ ಅಧಿಕಾರಿಯು ಸಮಯಾವಕಾಶ ಮೀರಿದರು ಯಾವ ಮಾಹಿತಿ ನೀಡದಿರುವುದನ್ನು ಪ್ರಶ್ನಿಸಿ ಕರ್ನಾಟಕ ಮಾಹಿತಿ ಆಯೋಗಕ್ಕೆ (ಪ್ರಕರಣ ಸಂ.ಕಮಾಅ./೫೦೦೧/ಎಪಿಎಲ್/೨೦೨೫) ಮೇಲ್ಮನವಿಯ ದೂರು ಸಲ್ಲಿಸಿದ್ದು.
ರಾಜ್ಯ ಮಾಹಿತಿ ಆಯುಕ್ತರಾದ ರಾಮನ್ ಕೆ ರವರು ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ/17/ಆರ್‌ಟಿಐ/2011 ಹಾಗೂ ದಿನಾಂಕ: 31.01.2011 ರ ಸುತ್ತೋಲೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳನ್ನು ಕುರಿತು ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ಕಾರ್ಯನಿರ್ವಾಹಣಾ ವರದಿಯಲ್ಲಿ ಷರಾ ಬರೆಯುವುದು ಹಾಗೂ ಈ ಆದೇಶವನ್ನು ಒಂದು ಪಕ್ಷ ಪ್ರತಿವಾದಿಗಳು ಪಾಲೀಸಲು ನಿರ್ಲಕ್ಷ್ಯ ಮತ್ತು ಉದಾಸೀನಾ ಮಾಡಿದರೆ, ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 20(1) ರ ಅಡಿಯಲ್ಲಿ ರೂ. 25,000/-ಗಳ ದಂಡವನ್ನು ಮತ್ತೊಮ್ಮೆ ಯಾವುದೇ ಕಾರಣ ಕೇಳಿಕೆ ನೋಟೀಸ್ ನೀಡದೇ ಹಾಗೂ ಸಮಯವಕಾಶವಿಲ್ಲದಂತೆ ಆದೇಶವನ್ನು ಮಾಡಿ ದಂಡವನ್ನು ಕ್ರಮಬದ್ಧಗೊಳಿಸಲಾಗುವುದು. ಮುಂದುವರೆದು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(2)ರ ಅಡಿಯಲ್ಲಿ ಪ್ರತಿವಾದಿಯಾದ ಶ್ರೀ ರೋಹಿತ್, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಬಿ.ಬಿ.ಎಂ.ಪಿ., ಉತ್ತರಹಳ್ಳಿ, ಸುಬ್ರಮಣ್ಯಪುರ ಮುಖ್ಯರಸ್ತೆ, ಪೊಲೀಸ್ ಠಾಣೆ ಹತ್ತಿರ, ಬೆಂಗಳೂರು ರವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿ ಆದೇಶಿಸಿ ಪ್ರಕರಣವನ್ನು ವಿಲೇವಾರಿ ಮಾಡಿದ್ದು. ಬೇಜವಾಬ್ದಾರಿತನದಿಂದ ಕಾರ್ಯನಿರವಹಿಸುವ ಅಧಿಕಾರಿಗೆ ಕಾನೂನಿನ ಪೆಟ್ಟು ನೀಡಿದ್ದಾರೆ.
ಈ ಕುರಿತಾಗಿ ಅಕ್ರಮದ ಬಗ್ಗೆ ಹೋರಾಟ ನಡೆಸಿದ ವಿದ್ಯಾರ್ಥಿ ಸಂಜಯ್, ಇತ್ತೀಚೆಗೆ ನಡೆಯುತ್ತಿರುವ ಭೂ ಅಕ್ರಮಗಳ ಈ ದೇಶದ ಅರ್ಥಿಕ ವ್ಯವಸ್ಥೆಯನ್ನು ಮತ್ತು ಸಮಾನ್ಯರ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹೀನ ಕೃತ್ಯವಾಗಿದ್ದು ಇಂತಹ ಸಮಸ್ಯೆಗಳನ್ನು ಎದುರಿಸ ಬೇಕಿರುವುದು ನಮ್ಮ ಕರ್ತವ್ಯ ಎಂದು ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಿಳಿಸಲು ಇಚ್ಚಿಸಿದ್ದಾರೆ.

